Kempu Thotadalli Song Lyrics is sung by S P B and S.janaki and Music is given by Hamsalekha Kempu Thotadalli Lyrics is written by Hamsalekha and Star cast are V Ravichandran, Poonam Dhillon and Master Manjunath
Singer | S P B and S.janaki |
Star Cast | V Ravichandran, Poonam Dhillon and Master Manjunath |
Music | Hamsalekha |
Song Writer | Hamsalekha |
Kempu Thotadalli Song Lyrics
ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹಾರುವಾಗ ನಾನು ದಾರಿ ತಪ್ಪಿ ಹೋದರೇನು
ಗತಿ ಹಂಸವೇ ನೀ ಹೀಗೇಕೇ ಕಾಡುತಿರುವೇ ಮರುಳೇ
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೇ
ನೀ ಹೀಗೇಕೇ ನಾಚುತಿರುವೆ ಮರುಳೇ
ನೋಡುವಾಗ ನನ್ನ ಜೀವ ಹಾರಿ ಹೋದರೇನು
ಗತಿ ಹಂಸವೇ ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವು ತೆರೆದಿದೆ ಮನಸಿನ ಕರೆಯಿದೆ
ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೇ (ಹೂಂ…)
ನೀ ಹೀಗೇಕೆ ನಾಚುತಿರುವೆ ಮರುಳೆ
ಹಲೋ…
ಓಓಓಓಓ
ಹಲೋ…
ಓಓಓಓಓ
ಹಲೋ…
ಓಓಓಓಓ
ಹಲೋ… ಓಓಓಓಓ
ಚಲೋ … ಬಳೆಗಾರ ತೊಡಿಸಿದ ಬಳೆಗೆ
ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ
ಸೋಕಿಲ್ಲಾ ಗೆಳೆಯ
ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತೀ ಇದೆ ಮೊದಲ ಸರತಿ
ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೇ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರೀ…
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗೆಳತಿಯ ಬೇರೆಯಲು ವಯಸಿನ ಭಯವಿದೆ
ಕೆಂಪು ತೋಟದಲ್ಲಿ
ಪಾರಿವಾಳ ನೋಡಲಿಕ್ಕೆ ರಾಯಭಾರವೆ
ನೀ ಹೀಗೇಕೇ ನಾಚುತಿರುವೇ ಮರುಳೇ
ಆಆಆ ….. ಆಆಆ ….. ಆಆಆ ….. ಆಆಆ …..
ನನ್ನದೆಯ ತೋಟದ ಹೂವು
ಕಳುವಾಗಿ ಹೋಯಿತು ನೆನ್ನೇ
ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೇ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೇ ಚಿನ್ನ
ಉಳಿದರ್ಧ ಹುಡುಕುತ ಬಂದೆ ಅದು ನೀನೇ ಚಿನ್ನ
ಉಸಿರಲಿ .. ನಿನ್ನ ಹೆಸರಿದೆ
ನುಡಿಯುತ ಇರುವೆ ಹೊರಗೆ ಬರದೇ
ಬೆರೆತೆಯೋ ನನಗೆ ತಿಳಿಯದೆ
ಮಿಡಿಯುತ ಇರುವೆ ಕೈಗೆ ಸಿಗದೇ
ಹೃದಯವೋ….. ತೆರೆದಿದೆ ಮನಸಿನ ಕರೆಯಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಕೆಂಪು ತೋಟದಲ್ಲಿ
ಒಮ್ಮೆ ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೇ ಹೆದರುತಿರುವೇ ಮರುಳೇ
ಹಾರುವಾಗ ನಾನು ದಾರಿ ತಪ್ಪಿ ಹೋದರೇನು
ಗತಿ ಪಾರಿವಾಳವೇ
ನೀ ಹೀಗೇಕೇ ಕಾಡುತಿರುವೇ ಮರುಳೇ
Kempu Thotadalli Song Lyrics
Movie – Yudha Kaanda