Kanasugarana Ondu Kanasu (Male) Song Lyrics is sung by S P B and music is given by V.ravichandran Kanasugarana Ondu Kanasu (Male) Lyrics is written by V.ravichandran and Star cast are V.Ravichandran and Isha Koppikar
Singer | S P B |
Star Cast | V.Ravichandran and Isha Koppikar |
Music | V.Ravichandran |
Song Writer | V.Ravichandran |
Kanasugarana Ondu Kanasu (Male) Song Lyrics
ಕನಸುಗಾರನ ಒಂದು ಕನಸು ಕೇಳಮ್ಮ
ಕನಸುಗಾರನ ಒಂದು ಕವನ ಕೇಳಮ್ಮ
ಈ ನನ್ನ ಕವನವ ಕೇಳಲು ಆ ಚಂದ್ರನು
ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
ಈ ಕವನಕೆ ಆ ಚಂದಿರ ಬಿಳಿಹಾಳೆಯಾಗಿ
ಕವಿಯಮನಸು ತುಂಬಿದನು
ಕನಸುಗಾರನ ಒಂದು ಕನಸು ಕೇಳಮ್ಮ
ಕನಸುಗಾರನ ಒಂದು ಕವನ ಕೇಳಮ್ಮ
ಹೂವೊಂದು ಕೇಳಿತಮ್ಮ ನಾನಿಲ್ಲದಿದ್ದರೇನು
ನೀನಿಲ್ಲದಿದ್ದರೆ ನಗುವೆ ಇಲ್ಲಮ್ಮ
ಹೂವೇ ಇಲ್ಲದ ಲೋಕ ನಮಗೇಕಮ್ಮ
ನಗುವೇ ಇಲ್ಲದ ಲೋಕ ನಮಗೇಕಮ್ಮ
ಈ ಲೋಕದ ಶೃಂಗಾರವೇ ನೀನೇ ಹೂವಮ್ಮ
ಈ ಲೋಕಕೆ ವೈಯ್ಯಾರವೇ ನೀನೇ ಹೂವಮ್ಮ
ಈ ಕವನ ಕೇಳಿ ಆ ಚಂದ್ರ ಕರಗಿದನು
ಕನಸುಗಾರನ ಒಂದು ಕನಸು ಕೇಳಮ್ಮ
ಕನಸುಗಾರನ ಒಂದು ಕವನ ಕೇಳಮ್ಮ
ಕನಸಿಗೆ ಇಲ್ಲ ಬೇಲಿ ಅದು ಬರುವುದು ತೇಲಿ
ಈ ಮನಸಿನ ಆಸೆ ಕನಸಾಗಿ ಬರುವುದಮ್ಮ
ನಾಳೆ ಅನ್ನುವುದೆ ಈ ಕನಸು ಕೇಳಮ್ಮ
ಕನಸು ಇಲ್ಲದ ಬಾಳು ನಮಗೇಕಮ್ಮ
ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯ ಬಲ್ಲೆ
ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ
ಈ ನನ್ನ ಹಾಡೆ ನನ್ನ ಕನಸು ಕೇಳಮ್ಮ
ಕನಸುಗಾರನ ಒಂದು ಕನಸು ಕೇಳಮ್ಮ
ಕನಸುಗಾರನ ಒಂದು ಕವನ ಕೇಳಮ್ಮ
ಈ ನನ್ನ ಕವನವ ಕೇಳಲು ಆ ಚಂದ್ರನು
ಕೆಳಗಿಳಿದು ಬಂದನು ಮೇಲ್ಹೋಗಲು ಮರೆತನು
ಈ ಕವನಕೆ ಆ ಚಂದಿರ ಬಿಳಿಹಾಳೆಯಾಗಿ ಕವಿಯಮನಸು ತುಂಬಿದನು
ಕನಸುಗಾರನ ಒಂದು ಕನಸು ಕೇಳಮ್ಮ
ಕನಸುಗಾರನ ಒಂದು ಕವನ ಕೇಳಮ್ಮ
Kanasugarana Ondu Kanasu (Male) Song Lyrics
Movie – O Nanna nalle