Kai Mugidu Yeru Song Lyrics – Saarathee | Darshan
Kai Mugidu Yeru Song Lyrics is sung by Shankar Mahadevan and the star cast of this movie are Challenging Star Darshan and Deepa Sannidhi and others Kai Mugidu Yeru Lyrics is written by V.Nagendraprasad and music is given by V.Harikrishna
Singer | Shankar Mahadevan |
Star cast | Challenging Star Darshan and Deepa Sannidhi and others |
Music | V.Harikrishna |
Song Writer | V.Nagendraprasad |
Kai Mugidu Yeru Song Lyrics
ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ
ಅತೀರಥ ಮಾಹಾರಥ ಸಾರಥೀ…
ಸೂರ್ಯ ನಮಗೆ ಎತ್ತುತಾನೆ ಆರತೀ…
ಅತೀರಥ ಮಾಹಾರಥ ಸಾರಥೀ…
ರಥ ನಡೆಸೋ ಕೃಷ್ಣನಿಗೆ ಸಂತತೀ…
ಬಂದನೋ ಬಂದನೋ ಬಂದನೋ ಬಂದನೋ ಬಂದನೋ…
ಬಂದನೋ ಬಂದನೋ ಸ್ಟೈಲಾಗಿ ಬಂದನೋ
ನಮ್ಮ ಸಾರಥಿ ಬಂದನೋ…
ಅವ್ನ ಮಾತಲ್ಲಿ ಗಂಭೀರ ಲುಕ್ಕಲ್ಲಿ ಬಲು ಶೂರ
ಯು ಕ್ಯಾನ್ ಗೆಟ್ ಎನಫ್ ಗೆಟ್ ಎನಫ್
ತಂದನೋ ತಂದನೋ ಗೆಲುವನ್ನು ತಂದನೋ
ಅರ್ಧ ರಾಜ್ಯಕ್ಕೆ ಒಡೆಯನೂ
ಪುಣ್ಯ ಮಾಡ ಬೇಕನ್ನೋ
ಕೈಯ ತಟ್ಟಿ ಕೂಗಿದರೆ ಹಾಜರಿ ನಾವು
ಹೇಳಿದಲ್ಲಿ ಹೋಗುವೆವು ಹೇಳಿರಿ ನೀವು
ಮೀಟರಿನ ಮೇಲೆ ನಯಾ ಪೈಸೆಯೂ ಬೇಡಾ
ಮಾನವತೆ ನಮಗೂ ಇದೆ ಮರೆಯಲೇ ಬೇಡಾ
ಉಚಿತ ಪಯಣವಿದೆ ಪ್ರಸವದ ನೋವಿಗೆ
ಹಗಲಿರುಳು ಕಡಿಮೆ ದರ ವೃದ್ದರ ಪಾಲಿಗೆ
ಯಾವದೇ ಸರ್ಕಾರ ಬಂದ್ರು
ಯಾರೇ ಸರದಾರ ಬಂದ್ರು
ನಮಗೆ ನಾವೇ ರಾಜ ಆಟೋ ರಾಜಾ…
ಅತೀರಥ ಮಹಾರಥ ಸಾರಥೀ…
ಯಾವ್ದೇ ಅಡ್ರೆಸ್ ಅಂದ್ರು ಇದೆ ಮಾಹಿತೀ…
ಅತೀರಥ ಮಾಹರಥ ಸಾರಥೀ…
ಎಲ್ಲರಿಗೂ ಗೊತ್ತು ನಮ್ಮ ಸಂಗತೀ…
ಡಿಗರಿಗಳು ಕಯ್ಯಲಿದೆ ದಡ್ಡರು ಅಲ್ಲಾ
ಸ್ವಂತ ಕೃಷಿ ಸಾಗುತಿದೆ ಚಿಂತೆಯೇ ಇಲ್ಲಾ
ಖಾಕಿ ಬಟ್ಟೆ ಧರಿಸುವೆವು ನ್ಯಾಯೇವೆ ನಾವು
ಜನಗಣಕೆ ದುಡಿಯುವೆವು ಮನಸೇ ಹೂವು
ಹೆತ್ತವರ ಹೊತ್ತವರ ಶಕ್ತಿಯು ಹಿಂದಿದೆ
ಬೆಳ್ಳಿತೆರೆ ಉತ್ತಮರ ಚಿತ್ರವೂ ಮುಂದಿದೆ
ಒಂದು ಕೃಷ್ಣನ ಚಕ್ರ…
ಎರಡು ಅಶೋಕ ಚಕ್ರ…
ಮೂರು ಕಾಲದ ಚಕ್ರ ಜೀವನ ಚಕ್ರಾ…
ಅತೀರಥ ಮಹಾರಥ ಸಾರಥೀ…
ಆಟೋ ಡ್ರೈವರ್ ಕೂಡ ಒಬ್ಬ ಸಾಹಿತಿ
ಅತೀರಥ ಮಹಾರಥ ಸಾರಥೀ…
ಎಲ್ಲರನು ಪ್ರೀತಿಸುವ ಸಂಸ್ಕೃತಿ
ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ
… ಸಾರಥಿ
ಸೂರ್ಯ ನಮಗೆ ಎತ್ತುತಾನೆ ಆರತೀ…
… ಸಾರಥಿ
ರಥ ನಡೆಸೋ ಕೃಷ್ಣನಿಗೆ ಸಂತತೀ…
Kai Mugidu Yeru Song Lyrics
Movie – Saarathee