Jagadaliro Song Lyrics – Bulbul | Darshan
Jagadaliro Song Lyrics is sung by Sonu Nigam and the star cast of this movie are Darshan Tugudeep, Dr Ambareesh & Rachitha Jagadaliro Lyrics is written by Kaviraj and mjusic is given by V.Harikrishna
Singer | Sonu Nigam |
Star cast | Darshan Tugudeep, Dr Ambareesh & Rachitha |
Music | V.Harikrishna |
Song Writer | Kaviraj |
Jagadaliro Song Lyrics
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ಬಾ ಕೂರು ಒರಗಿ ಸಮಯ ಹಾಗೆ ಜರುಗಿ ಯುಗಾನೆ ಜಗಾನೇ ಕೊನೆ ಆಗುವರೆಗೆ
ಇನ್ನೇಕೆ ಒಲವೆ ನಮಗೆ ಬೇರೆ ಗೊಡವೆ ಇರೋಣ ಇರೋಣ ಜೊತೆ ಎಂದು ಹೀಗೆ
ಮುಳುಗೋದೆ ಬೇಡಯ್ಯ ರವಿಯೇ ನೀನು ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿಕೊಡುವಿರಾ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ಆತಂಕ ಸಹಜ ನಿಜ ನಾನೊಬ್ಬ ಮನುಜ ತಪ್ಪೇನು ಒಪ್ಪೆನು ನೀ ಇರಬೇಡ ದೂರ
ಈ ಲೊಕದಗಲ ಇರೋ ಸಂತೋಷ ಸಕಲ ತರೋದ ಬಿಡೋದ ನಿನ್ನ ಪಾದದಡಿಗೆ
ಒಂದೊಂದು ಹೆಜ್ಜೆನಾ ಇಡಲು ನೀನು ಎಂದೆಂದೂ ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನಂದೇ ಕಣೆ ಅದೇನೇ ಅದರೂ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ನೀ ನನ್ನವಳೇನ್ನುವುದೆ ನನಗೆ ಜಂಬ ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನಿಡು ಪ್ರೀತಿ ಸಾಲ ಇನ್ನೇನು ಬೇಡ ಇಷ್ಟೇ ಬೇಡಿಕೆ
Jagadaliro Song Lyrics
Movie – Bulbul